ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ಚುನಾವಣೆಗಳನ್ನು ಏಪ್ರಿಲ್ ತಿಂಗಳಲ್ಲಿ ನಡೆಸುವುದಾಗಿ ರಾಜ್ಯ ಚುನವಣಾ ಆಯುಕ್ತರಾದ ಜಿ.ಎಸ್.ಸಂಗ್ರೇಣಿ ತಿಳಿಸಿದ್ದಾರೆ.
ಸ್ಥಳಿಯ ಸಂಸ್ಥೆಗಳ ಕ್ಷೇತ್ರಗಳ ಮರು ವಿಂಗಡಣೆ ವಿಳಂಬವಾಗಿತ್ತು.ಕ್ಷೇತ್ರವಾರು ಮೀಸಲಾತಿ ಪಟ್ಟಿ ಘೋಷಿಸಿದ ತಕ್ಷಣ ಚುನಾವಣಾ ದಿನಾಂಕ ಪ್ರಕಟವಾಗುತ್ತದೆ ಎಂದರು.ಈ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರದ ಬದಲು ಮತ ಪತ್ರಗಳ ಬಳಕೆ ಚಿಂತನೆ ನಡೆದಿದೆ.
ಅಂತೀಮವಾಗಿಲ್ಲ ಎಂದರು.ಪ್ರತಿ ಸಲ ವಿದ್ಯುನ್ಮಾನ ಮತ ಯಂತ್ರಗಳ ಪಾರದರ್ಶಕತೆ ಪ್ರಶ್ನೆ ಮಾಡಲಾಗುತ್ತಿದೆ.ಅದಕ್ಕೆ ರಾಜಕೀಯ ಪಕ್ಷಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ,ನಿರ್ಣಯ ಕೈಗೊಳ್ಳಲಾಗುವುದು ಎಂದರು.ಹೊಸದಾಗಿ 7 ಪಟ್ಟಣ ಪಂಚಾಯತ್ಗಳು ರಚನೆಯಾಗಿದ್ದು, ಇವುಗಳ ಚುನಾವಣೆಯೂ ಸಾರ್ವತ್ರಿಕ ಚುನಾವಣೆ ನಡೆಸುವ ಈರಾದೆ ಇದೆ ಎಂದರು.