ವಿಧಾನಸೌಧದಲ್ಲಿ ದತ್ತಪೀಠಕ್ಕೆ ಸಂಬಂಧ ಪಟ್ಟಂತೆ ರಾಜ್ಯದ ಗೃಹ ಸಚಿವರು ಜಿ. ಪರಮೇಶ್ವರ್ ಅವರಿಗೆ ದಾಖಲೆ ನೀಡಿದ ರಘು ಸಕಲೇಶಪುರ.
ಬೆಂಗಳೂರು. ದತ್ತಪೀಠದಲ್ಲಿ ನೇಮಕಗೊಂಡಿರುವ ಹಿಂದೂ ಅರ್ಚಕರು ಮತ್ತು ವ್ಯವಸ್ಥಾಪನಾ ಸಮಿತಿ ವಜಾಗೊಳಿಸುವಂತೆ ಶಾಖಾದ್ರಿ ಸುಪ್ರೀಂಕೋರ್ಟ್ ನಲ್ಲಿ SLP 10131 ದಾವೆ ಹೂಡಿದ್ದು ಕೋರ್ಟ್ ರಾಜ್ಯಸರ್ಕಾರಕ್ಕೆ 24 ಮಾರ್ಚ್ 2025 ಕ್ಕೆ ಅಂತಿಮ ವರದಿ ಸಲ್ಲಿಸಬೇಕು ಎಂದು ಗಡುವು ಮತ್ತು ಆದೇಶ ಮಾಡಿರುವುದರಿಂದ ದಿನಾಂಕ 17.01.25 ರಂದು ವಿಧಾನಸೌಧದ 3 ನೇ ಮಹಡಿಯ 334 ನೇ ಕೊಠಡಿಯಲ್ಲಿ ಸಭೆ ಕರೆಯಲಾಗಿತ್ತು.
ಬೆಂಗಳೂರು : ವಿಧಾನಸೌಧದಲ್ಲಿ ಜನಪ್ರತಿನಿಧಿಗಳು, ಸ್ವಾಮೀಜಿಗಳು, ಹಿಂದೂ ಮುಖಂಡರು ಹಾಗೂ ಮುಸ್ಲಿಮ್ ಮುಖಂಡರು ಹಾಗೂ ಶಾಖಾದ್ರಿ ಅಹವಾಲು ಸ್ವೀಕಾರ ಮಾಡಿದ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾದ ಜಿ.ಪರಮೇಶ್ವರ್, ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣಬೈರೇಗೌಡ, ಇಂಧನ ಸಚಿವ ಕೆ.ಜೆ ಜಾರ್ಜ್ ವಸತಿ ಸಚಿವ ಜಮೀರ್ ಅಹಮದ್, ಕಂದಾಯ ಇಲಾಖೆ ಕಾರ್ಯದರ್ಶಿ, ಇತರೆ ಅಧಿಕಾರಿಗಳು ಅಹವಾಲು ಸ್ವೀಕಾರ ಮಾಡಿದರು.
ದತ್ತಪೀಠದ ಗುಹೆ ಒಳಗೆ ಹೋಗುವ ಮುಂಭಾಗ ಇರುವ ಕಲ್ಲಿನ ಕಂಬದಲ್ಲಿ ಹಿಂದೂ ಕುರುವುಹುಗಳಿದ್ದು ಇದರ ಮಾಹಿತಿಯನ್ನು ಮಾನ್ಯ ಗೃಹ ಸಚಿವರಿಗೆ ಮಾಹಿತಿ ಪತ್ರದ ಮೂಲಕ ನೀಡಿದ ಹಿಂದೂ ಮುಖಂಡ ರಘು ಸಕಲೇಶಪುರ ಹಾಗೂ ಇತರರಿದ್ದರು.
ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾದ ಶ್ರೀ ಜಿ.ಪರಮೇಶ್ವರ್ ಮಾತನಾಡಿ ರಾಜಕೀಯ ಲಾಭಕ್ಕೆ ಬಳಸದೆ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ಭರವಸೆ ನೀಡಿದರು.