ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ….
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಳ 6ನೇ ತರಗತಿಗೆ ಪ್ರವೇಶ ಪರೀಕ್ಷೆಗೆ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಐದನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ
ಪೋಷಕರು ತಮ್ಮ ಮತ್ತು ವಿದ್ಯಾರ್ಥಿಗಳ ಆಧಾರ್ ಕಾರ್ಡುಗಳನ್ನು, ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಎರಡು ಫೋಟೋಗಳೊಂದಿಗೆ ಸಮೀಪದ ವಸತಿ ಶಾಲೆಗೆ ತೆರಳಿ ಅರ್ಜಿಗಳನ್ನು ಹಾಕಬಹುದು ಜನವರಿ 25 2025ನೇ ಇಸವಿ ಕೊನೆ ದಿನಾಂಕವಾಗಿದ್ದು
ಆದಷ್ಟು ಬೇಗ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರು ಸಮೀಪದ ವಸತಿ ವಸತಿ ಶಾಲೆಗೆ ತೆರಳಿ ಅರ್ಜಿ ಹಾಕಬಹುದಾಗಿದೆ. ಪ್ರವೇಶ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಐದನೇ ತರಗತಿಯ ಪಠ್ಯಪುಸ್ತಕಗಳನ್ನು ಉತ್ತಮವಾಗಿ ಓದುವುದು ಮತ್ತು ವಸತಿ ಶಾಲೆಗಳ ಶಿಕ್ಷಕರೇ ರಚಿಸಿರುವ ಸೋಪಾನ ಎಂಬ ಮಾರ್ಗದರ್ಶಿ ಪುಸ್ತಕವನ್ನು ಅಭ್ಯಾಸಿಸಬಹುದಾಗಿದೆ.
ವಿಷಯ ತಿಳಿದ ಸಾರ್ವಜನಿಕ ಬಂಧುಗಳು ತಮಗೆ ಪರಿಚಿತವಿರುವ ಸಂಬಂಧಿಗಳ ಹಾಗೂ ಅಕ್ಕಪಕ್ಕದವರಿಗೆ ಪ್ರವೇಶ ಪರೀಕ್ಷೆಯ ಮಾಹಿತಿಯನ್ನು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ವಿದ್ಯಾರ್ಥಿಗಳು ಅರ್ಜಿ ಹಾಕಲು ಪ್ರೇರೇಪಿಸಬೇಕು ಎಂದು ಈ ಮೂಲಕ ಎಲ್ಲ ವಸತಿ ಶಾಲೆಗಳ ಪರವಾಗಿ ವಿನಂತಿಸಿಕೊಳ್ಳುತ್ತೇನೆ .
ಪ್ರಾಂಶುಪಾಲರು ಮತ್ತು ಬೋಧಕ ಬೋಧಕೇತರ ವರ್ಗ
ಮೊರಾರ್ಜಿ ದೇಸಾಯಿ ವಸತಿ ಶಾಲೆ
ಬ್ಯಾಕರವಳ್ಳಿ ಸಕಲೇಶಪುರ