ಕಾಡ್ಗಿಚ್ಚು ಬೆಂಕಿಯಿಂದ ಅರಣ್ಯ ರಕ್ಷಣೆ ಮಾಡುವವರೆಗೂ ಸಂಘ ಸಂಸ್ಥೆಗಳು, ಗ್ರಾಮ ಅರಣ್ಯ ಸಮಿತಿಗಳು, ಹಾಗೂ ಸಾರ್ವಜನಿಕರಾದ ನಿಮ್ಮಗಳ ಸೇವೆ ಸಹಕಾರ ಅತೀ ಮುಖ್ಯವಾಗಿದ್ದು, ಅಂತಹ ಸೇವೆ ಸಹಕಾರ ಸದಾ ನಮ್ಮ ಜೊತೆಯಲ್ಲಿರಲೆಂದು ಅಪೇಕ್ಷಿಸುತ್ತೇವೆ.
ವಲಯ ಅರಣ್ಯಾಧಿಕಾರಿಗಳ ಕಛೇರಿ, ಸಕಲೇಶಪುರ ವಲಯ, ಸಕಲೇಶಪುರ,
ಈ ಮೂಲಕ ಸಾರ್ವಜನಿಕರಿಗೆ, ಸಮಿತಿ ವಿವಿಧ ಸಂಘ ಸಂಸ್ಥೆಗಳು, ಗ್ರಾಮ ಅರಣ್ಯ ಸಹಭಾಗಿತ್ವದಲ್ಲಿ ಪಾಲ್ಗೊಂಡ ಎಲ್ಲಾ ಬಾಂಧವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಹಾಸನ ಅರಣ್ಯ ವಿಭಾಗದ ಸಕಲೇಶಪುರ ವಲಯ ಅರಣ್ಯ ಪ್ರದೇಶವು ಅತೀ ವಿಸ್ತಾರವಾದ ಪಶ್ಚಿಮ ಘಟ್ಟಗಳಿಂದ ಕೂಡಿದ ಸರಿಸುಮಾರು 16228ಹ. ಕಾಯ್ದಿಟ್ಟ ಅರಣ್ಯ ಪ್ರದೇಶಗಳಿಂದ ಕೂಡಿದೆ.
ಈ ವಲಯದಲ್ಲಿ ಕಬ್ಬಿನಾಲೆ, ಕಂಪೂಳೆ, ಕೆಂಚನಕುಮರಿ, ಕಾಗೆನರಿ, ಮೂರ್ಕಣ್ಗುಡ್ಡ, ಆಚಂಗಿದೊಡ್ಡನಾಗರ, ವಡೂರು ಮತ್ತು ಮಂಜಬಾದ್ ಕೋಟೆ ಅರಣ್ಯ ಪ್ರದೇಶಗಳು ಪ್ರಮುಖ ಅರಣ್ಯ ಪ್ರದೇಶಗಳಾಗಿದ್ದು, ಅತ್ಯಾಮುಲ್ಯವಾದ ಬೆಲೆ ಕಟ್ಟಲಾಗದ ಅರಣ್ಯ ಸಂಪತ್ತಿನ ಜೊತೆಗೆ ವೈವಿಧ್ಯಮಯ ಜೀವ ಸಂಕುಲವನ್ನು ಹೊಂದಿದ್ದು, ಜೊತೆಗೆ ಪ್ರಮುಖ ನದಿಗಳಾದ ಕೆಂಪೊಳೆ, ಎತ್ತಿನಹಳ್ಳ, ಹೊಂಗಡಹಳ್ಳ, ಹೇಮಾವತಿ ನದಿಗಳು ಸದಾ ಹರಿಯುತ್ತಿರುತ್ತವೆ.
ಸಕಲೇಶಪುರ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಕಬ್ಬಿನಾಲೆ, ಮೂರ್ಕಣ್ಣುಗುಡ್ಡ, ಮಾರನಹಳ್ಳಿ, ಬ್ಯಾಕರವಳ್ಳಿ, ಬೆಳಗೋಡು, ಮಂಜ್ರಾಬಾದ್, ಹಾನುಬಾಳು ಶಾಖಾ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶಗಳಿಗೆ ಬೇಸಿಗೆ ಕಾಲದಲ್ಲಿ ಬೆಂಕಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಹಾಗೂ ಬೆಂಕಿ ಬಿದ್ದರೆ
ನಂದಿಸುವ ಬಗ್ಗೆ “ಬೀದಿನಾಟಕ ಕಾರ್ಯಕ್ರಮ’ವನ್ನು ಈ ಕೆಳಕಂಡಂತೆ ಆಯೋಜಿಸಲಾಗಿದೆ.
ದಿನಾಂಕ/ಸಮಯ( 1). 24/01/2025 (2). 28/01/2025 10.30 80 12.30 10.30 80 12.30 (3). 29/01/2025 10.30 80 12.30 4. 30/01/2025 10.30 80 12.30 ಕಾರ್ಯಕ್ರಮ ಅಯೋಜಿಸುವ ಸ್ಥಳ ಹಾನುಬಾಳು ಹೋಬಳಿ ಹಾನುಬಾಳು ವೃತ್ತ ಕಸಬಾ ಹೋಬಳಿ ಬ್ಯಾಕರವಳ್ಳಿ ವೃತ್ತ ಪೂರ್ವ ಕಾಲೇಜು, ಹಾನುಬಾಳು ಹೋಬಳಿ ಕಾಡುಮನೆ ವೃತ್ತ ಕಸಬಾ ಹೋಬಳಿ ಸರ್ಕಾರಿ ಪದವಿ ಬಸವನಹಳ್ಳಿ
ಕಾರ್ಯಗಾರವನ್ನು ಮು೦ದುವರೆದು ಅಗ್ನಿಶಾಮಕಾಠಾಣಾ ಇಲಾಖೆಯಿಂದ ಬೆಂಕಿ ನಂದಿಸುವ ಹಮ್ಮಿಕೊಳ್ಳಲಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಪ್ರಾಂಶುಪಾಲರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಗಾರವನ್ನು ಬರುವಂತೆ ಈ ಮೂಲಕ ಕೋರಲಾಗಿದೆ.
ಅದಂತೆ ಇಲಾಖಾವತಿಯಿಂದ ಬೆಳೆಸಲಾದ ವಿವಿಧ ವರ್ಗಗಳ ನೆಡುತೋಪುಗಳ ಜೊತೆಗೆ ಈ ವಲಯದ ವ್ಯಾಪ್ತಿಗೆ ಬರುವ ಸರಿಸುಮಾರು 16228.00ಹೆ. ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ರಕ್ಷಣೆ ಮಾಡಲು ನಮ್ಮಲ್ಲಿ ಸಿಬ್ಬಂದಿಯ ಕೊರತೆ ಪ್ರಮುಖ ಕಾರಣವಾಗಿದ್ದು, ಸಾಕಷ್ಟು ಸಿಬ್ಬಂದಿ ಇದ್ದಾಗ್ಯೂ ಕೂಡ ಅರತ್ಯೇತರ ಚಟುವಟಿಕೆಯಿಂದ ಹಿಡಿದು ಬೆಂಕಿಯಿಂದ ಅರಣ್ಯ ರಕ್ಷಣೆ ಮಾಡುವವರೆಗೂ ಸಂಘ ಸಂಸ್ಥೆಗಳು, ಗ್ರಾಮ ಅರಣ್ಯ ಸಮಿತಿಗಳು, ಹಾಗೂ ಸಾರ್ವಜನಿಕರಾದ ನಿಮ್ಮಗಳ ಸೇವೆ ಸಹಕಾರ ಅತೀ ಮುಖ್ಯವಾಗಿದ್ದು, ಅಂತಹ ಸೇವೆ ಸಹಕಾರ ಸದಾ ನಮ್ಮ ಜೊತೆಯಲ್ಲಿರಲೆಂದು ಅಪೇಕ್ಷಿಸುತ್ತೇವೆ.
ಮುಂದುವರೆದು ಪಶ್ಚಿಮಘಟ್ಟ ಅರಣ್ಯ ಪ್ರದೇಶಗಳನ್ನು ರಕ್ಷಿಸುವುದು, ಪೋಷಿಸುವುದು ನಮ್ಮ ನಿಮ್ಮೆಲರ ಹೊಣೆಯಾಗಿರುತ್ತದೆ. ಅದರಂತೆ ಸಂಘ ಸಂಸ್ಥೆಗಳು, ಗ್ರಾಮ ಅರಣ್ಯ ಸಮಿತಿಗಳು ಹಾಗೂ ಸಾರ್ವಜನಿಕರಲ್ಲಿ ನಾವು ಮತ್ತೊಮ್ಮೆ ವಿನಂತಿಸಿಕೊಳ್ಳುವುದೇನಂದರೆ ಯಾವುದೇ ಸಮಯದಲ್ಲಿ ಅರಣ್ಯ ಪ್ರದೇಶಕ್ಕೆ ಕಾಡಿಚ್ಚು ಬಿದ್ದಂತಹ ಸಂದರ್ಭದಲ್ಲಿ ತಕ್ಷಣ ಈ ಕೆಳ ಸಹಿದಾರರು ಹಾಗೂ ಮೇಲ್ಪಟ್ಟ ಅಧಿಕಾರಿಗಳ ಗಮನಕ್ಕೆ ಕೂಡಲೇ ತರುವುದರ ಜೊತೆಗೆ ಇಲಾಖೆಯೊಂದಿಗೆ ಸಹಕರಿಸಿ “ಬೆಂಕಿಯಿಂದ ಅರಣ್ಯ ರಕ್ಷಣೆ” ಮಾಡಲು ಸದಾ ನಮ್ಮೊಂದಿಗಿದ್ದು ಕೈಜೋಡಿಸುತ್ತೀರೆಂದು ಆಶಿಸುತ್ತೇನೆ. “ಇದು ಸಕಲೇಶಪುರ ಅರಣ್ಯ
ಕರೆ ಮಾಡಬಹುದಾದ ದೂರವಾಣಿ ಸಂಖ್ಯೆ ಇಂತಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹಾಸನ ವಿಭಾಗ, ಹಾಸನ-9903434254 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಸಕಲೇಶಪುರ ಉಪ ವಿಭಾಗ ಸಕಲೇಶಪುರ-9980111235 ವಲಯ ಅರಣ್ಯಾಧಿಕಾರಿ, ಸಕಲೇಶಪುರ ವಲಯ, ಸಕಲೇಶಪುರ- 9880122216 ಅರಣ್ಯ ಸಹಾಯ ವಾಣಿ -1926