ಸಕಲೇಶಪುರ ಉಪವಿಭಾಗದ ಸಕಲೇಶಪುರ ವಲಯದ ಹಾನು ಬಾಳು ಶಾಖೆ ಹಾನು ಬಾಳು ಗಸ್ತಿನ ಮರಗುಂದ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಒಂದು ಗಂಡು ಆನೆಯು ಮೃತಪಟ್ಟಿದ್ದು
ಅದರ ಕಳೆಬರಹ ಕಂಡುಬಂದ ಮೇರೆಗೆ ಈ ಬಗ್ಗೆ ಮಾನ್ಯ ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು
ನಂತರ ಭದ್ರ ವನ್ಯಾ ಜೀವಿ ವಿಭಾಗದ ಪಶುವೈದ್ಯಧಿಕಾರಿ ಡಾ ಮಸಿಯಣ್ಣ ಹಾಗೂ ಸಕಲೇಶಪುರ ಪಶುವೈದ್ಯಧಿಕಾರಿ ಡಾ ಸಾಗರ್ ಮತ್ತು ಪಶುವೈದ್ಯಕೀಯ ಸಿಬ್ಬಂದಿ ಗಳು ಸಮ್ಮುಖದಲ್ಲಿ ಮೃತ ಪಟ್ಟ ಸ್ಥಳದ ಅಕ್ಕಪಕ್ಕದಲಿ ಪರಿಶೀಲಿಸಿದಾಗ ಆನೆಗಳ ಹೆಜ್ಜೆಗಳು ಕಂಡುಬಂದಿದ್ದು ಹಾಗೂ ಆನೆಗಳ ಕಾಳಗದಿಂದ ಮರಗಳು ಗಿಡಗಳು ಮುರಿ ದಿರುವುದೂ ಕಂಡು ಬಂದಿರುವುದರಿಂದ ಮೇಲ್ನೋಟಕ್ಕೆ ಆನೆಯು ಆನೆಗಳ ಕಾಳಗದಿಂದ ಮೃತಪಟ್ಟಿರಬಹುದು ಎಂದು ತೀರ್ಮಾನಿಸಲಾಯಿತು
ಸದರಿ ಆನೆಯು ಕೆಲವು ದಿನಗಳಿಂದ ಕಾಡುಮನೆ, ಮರಗುಂದ ಭಾಗಗಳಲ್ಲಿ ಗದ್ದೆ ತೋಟ ಗಳಲ್ಲಿ ಓಡಾಡುವದನ್ನು RRT ಸಿಬ್ಬಂದಿಗಳು ಗಮನಿಸಿರುತಾರೆ ಈ ಆನೆಯು ಒಂಟಿ ಕೊರೆಯ ಆನೆಯಾಗಿದು ಮೃತ ಆನೆ ಯ ಅಂಗಾಂಗ ಮಾದರಿಗಳನ್ನು ಮುಂದಿನ ವೈದ್ಯಕೀಯ ಪರೀಕ್ಷೆಗೆ ಸಂಗ್ರಹಿಸಿದ್ದು ,
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಎಡ ಭಾಗದ ಉದ್ದ ಕೋರೆ, ಬಲ ಭಾಗದ ಚಿಕ್ಕ ಕೋರೆಯನ್ನು ತೆಗೆದು ಇಲಾಖ ವಶಕ್ಕೆ ತೆಗೆದುಕೊಳ್ಳಲಾಯತು ನಿಯಮಾನುಸಾರ ಆನೆ ಕಳೆ ಬರಹವನ್ನು ವಿಲೇವಾರಿ ಮಾಡಲಾಯಿತು ಮುಂದಿನ ಕ್ರಮ ಕೈಗೊಳ್ಳಲಾಗಿದೆ.