ಇದೇನು . ಸಕಲೇಶಪುರದಲ್ಲಿ ಶ್ರೀ ಸಕಲೈಶ್ವರ್ಯ ಸ್ವಾಮಿಯ ಜಾತ್ರೆಯೋ ಇಲ್ಲ ಸಂಘಟನೆ ಗಳ ಪ್ರತಿಷ್ಠೆಯ ಬಡಿದಾಟವೋ ಇಲ್ಲ ಪುರಸಭೆ ಹಾಗೂ ಪಂಚಾಯಿತಿಯ ಜಿದ್ದಾ ಜಿದ್ದಿಯ ಇಲ್ಲ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಒಮ್ಮತವಿಲ್ಲದ ನಿರ್ಧಾರಗಳೇ..? ಇನ್ನೂ ಒಂದು ಸಂಶಯ ವೆಂದರೆ ಇದೆಲ್ಲಾ ಕೆಲವರು ಅನ್ಯ ಮಾರ್ಗಗಗಳೋ ಅಥವಾ ಕೆಲವರ ವಯಕ್ತಿಕ ಹಿತಾಶಕ್ತಿಯೊ?? ಒಬ್ಬೊಬ್ಬರ ಒಂದೊಂದು ರೀತಿಯ ತದ್ವಿರುದ್ಧ ಹೇಳಿಕೆಗಳಿಂದ ದಿನೆ ದಿನೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿರುವುದು ಸತ್ಯ, ಎಲ್ಲರಿಗೂ ಸಾರ್ವಜನಿಕರ ಹಿತಾಶಕ್ತಿಯೆ ಮುಖ್ಯವಾಗಿದ್ದರೆ ನಿಜವಾಗಿಯೂ ಸಾರ್ವಜನಿಕರ ಒಳಿತನ್ನೇ ಬಯಸುವವರಾದರೆ ನಿಮ್ಮ ನಿಮ್ಮ ಪ್ರತಿಷ್ಠೆ ಗಳನ್ನ ಬದಿಗಿಟ್ಟು ಎಲ್ಲರೂ ಕುಳಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಂಡು ತಾಲ್ಲೂಕಿನಾದ್ಯಂತ ಹಳ್ಳಿ ಹಳ್ಳಿಯ ಮೂಲೆ ಮೂಲೆ ಗಳಿಂದ ಜಿಲ್ಲೆ ರಾಜ್ಯ ಹೊರ ರಾಜ್ಯ ದೇಶ ವಿದೇಶಗಳಲ್ಲಿಯು ಸಹ ಬದುಕು ಕಟ್ಟಿಕೊಂಡಿರುವ ಸ್ಥಳೀಯ ಭಕ್ತಾದಿಗಳು ಸಾರ್ವಜನಿಕರು ಕುಟುಂಬ ಸಮೇತ ಆಗಮಿಸಲು ತುದಿಗಾಲಲ್ಲಿ ಇರುವಾಗ ಯಾವುದೇ ರೀತಿಯ ಗೊಂದಲಗಳು ಅನಾಹುತಗಳು ಎದುರಾಗದಂತೆ ದಯವಿಟ್ಟು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ.
ಶ್ರೀ ಸಕಲೈಶ್ವರ್ಯ ಸ್ವಾಮಿಯವರ ರಥೋತ್ಸವ ಮತ್ತು ವಸ್ತು ಪ್ರದರ್ಶನ ಯಶಸ್ವಿ ಯಾಗುವತ್ತ ಗಮನ ಹರಿಸಿ.
ಎಂದು ನಗರದ ವರ್ತಕರಾದ ಬುಗುಡಹಳ್ಳಿ ಚಂದ್ರು ರವರು ಸಾರ್ವಜನಿಕರ ಪರವಾಗಿ ಮನವಿ ಜೊತೆಗೆ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.