ಮಹಾಶಿವರಾತ್ರಿಯಂದು ಜಾಗರಣೆ ಮಾಡಿದ ಭಕ್ತರಿಗೆ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರಾಮದೂತ ಹಿಂದೂ ಮಹಾಗಣಪತಿ ಕಾರ್ಯಕರ್ತರು ಪ್ರಸಾದ ಬಡಿಸಿದರು.
ಪ್ರತಿವರ್ಷ ಮಹಾಶಿವರಾತ್ರಿ ದಿನದಂದು ಸಕಲೇಶಪುರದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಲಿನ ಅಭಿಷೇಕ ಎಳನೀರಿನ ಅಭಿಷೇಕ ಆಗಿ ರಾತ್ರಿ ಜಾಗರಣ ಮಾಡಿದ ಭಕ್ತರು
ದಿನಾಂಕ 27.02 .25 ರಂದು ಬೆಳಗ್ಗೆ 6.40 ರಿಂದ 2 ಗಂಟೆ ವರೆಗೆ ನಿರಂತರವಾಗಿ ಭಕ್ತರಿಗೆ ಪ್ರಸಾದ ಬಡಿಸಲಾಯಿತು
ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಕಾರ್ಯಕರ್ತರು ಬೆಳಗ್ಗೆ 6.30 ರಿಂದ 45 ಕ್ಕೂ ಹೆಚ್ಚು ಕಾರ್ಯಕರ್ತರು ಪ್ರಸಾದ ಬಡಿಸಿದ್ದಾರೆ.
10 ಕ್ಕೂ ಹೆಚ್ಚು ಕೌಂಟರ್ ಮಾಡಿದ ಕಾರ್ಯಕರ್ತರು ವಯಸ್ಸಾದ ಮತ್ತು ಶಾಲಾ ಮಕ್ಕಳಿಗೆ ವಿಶೇಷ ಆಸನ ವ್ಯವಸ್ಥೆ ಮಾಡಿ ಪ್ರಸಾದ ಬಡಿಸಲಾಯಿತು
ಈ ಸಂದರ್ಭದಲ್ಲಿ ಕಳೆದ 25 ವರ್ಷದಿಂದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರು ಆಗಿರುವ ಶ್ರೀ ದುಲ್ ರಾಜ್ ಜೈನ್ ಮಾತನಾಡಿ ರಾಮದೂತ ಹಿಂದೂ ಮಹಾಗಣಪತಿ ಸೇವಾ ಸಮಿತಿ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮದೂತ ಗಣಪತಿ ಸಂಚಾಲಕ ಪ್ರದೀಪ್, ದುಷ್ಯಂತ್ ಗೌಡ, ಮಂಜು ಕಬ್ಬಿನಗದ್ದೆ, ಹಿಂದೂ ಮುಖಂಡ ಕೌಶಿಕ್, ಶಿವೂ ಜಿಪ್ಪಿ, ವಿದ್ಯಾರ್ಥಿ ಪ್ರಮುಖ್ ಜತಿನ್, ದೀಲಿಪ, ಧರ್ಮೇಶ್,ಶೇಖರ್ ಕಬ್ಬಿನಗದ್ದೆ ಇತರರು ಪ್ರಸಾದ ವಿತರಣೆ ಮಾಡಿದರು