ಸಕಲೇಶಪುರದಲ್ಲಿ ಎಗ್ಗಿಲ್ಲದೆ ನಡಿಯುತ್ತಿರುವ ಅಕ್ರಮ ಗೋಸಾಗಾಣಿಕೆ. ವಿರುದ್ಧ ಸಾರ್ವಜನಿಕರ ಆಕ್ರೋಶ…!!!
ಅತ್ಯಂತ ಕ್ರೂರವಾಗಿ ಹಿಂಸೆಯಿಂದ ಗೋವುಗಳ ಸಾಗಾಣಿಕೆ
ದಾರಿ ತಪ್ಪಿ ಪಲ್ಟಿಯಾದ ಪಿಕಪ್ ವಾಹನ •ಎಮ್ಮೆ ಮತ್ತು ಹಸು ಚರಂಡಿಗೆ ಬಿದ್ದು ಸಾವು ಬದುಕಿನ ನಡುವೆ ನರಳಾಡುತಿದ್ದನ್ನು ಸಾರ್ವಜನಿಕರು ನೋಡಿ ಆಕ್ರೋಶ ವ್ಯಕ್ತಪಡಿಸಿದರು
ಸಕಲೇಶಪುರದ ನೂತನ ಕೆಂಪೇಗೌಡ ವೃತ್ತದ ಬಳಿ ದಿನಾಂಕ 12.03.25 ರ ರಾತ್ರಿ 10.20 ರ ಸಮಯದಲ್ಲಿ ವಾಹನ ಸಂಖ್ಯೆ KA.13 D 6683
ಟಾಟಾ ಇಂಟ್ರಾ ವಾಹನ ಅತಿ ವೇಗದಲ್ಲಿ ಬಂದು ಕಾಮಗಾರಿ ನಡಿಯುತ್ತಿರುವ ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸಿ ಪಲ್ಟಿ ಮಾಡಿ ವಾಹನದಲ್ಲಿ ಇದ್ದ 5 ಗೋವುಗಳಲ್ಲಿ 2 ಗೋವುಗಳು ವಾಹನದಿಂದ ಹೊರಗೆ ಹಾರಿ ಬಿದ್ದು ಸಾವು ಬದುಕಿನ ನಡುವೆ ಒದ್ದಾಡುತಿದ್ದದ್ದು ಮತ್ತು ಗೋವಿನ ಆಕ್ರಂಧನ ಎಂಥವರ ಕಣ್ಣಲ್ಲೂ ನೀರು ಬರಿಸುವಂತಿತ್ತು ಎಂದು ಶಿವೂ ಜಿಪ್ಪಿ ನೋವು ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿ ವಾಹನದಲ್ಲಿ ಇದ್ದ ಇನ್ನ 3 ಗೋವುಗಳ ಪತ್ತೆಗೆ ನಾಕಾಬಂದಿ ಹಾಕಿದರು.
ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಕಾರ್ಯಕರ್ತರು ಪೊಲೀಸರು ಸಾರ್ವಜನಿಕರು ಸೇರಿ ಗೋವುಗಳನ್ನ ಚರಂಡಿ ಯಿಂದ ಮೇಲೆ ತೆಗೆದು ರಕ್ಷಣೆ ಮಾಡಿ ಪೊಲೀಸ್ ಮಜರ್ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸಕಲೇಶಪುರದ ಸ್ಥಳೀಯ ಕೆಲ ಪಟ್ಟಬದ್ದ ಮುಸ್ಲಿಮರು ಅನೈತಿಕವಾಗಿ ಗೋವುಗಳ ಸಾಗಾಣಿಕೆಗೆ ಬೆಂಬಲ ನೀಡುತ್ತಿದ್ದು ಆತಂಕಕಾರಿ ಬೆಳವಣಿಗೆಯಾಗಿದ್ದು.
ಸಾರ್ವಜನಿಕರು ಅಕ್ರಮ ಗೋವುಗಳ ಸಾಗಾಣಿಕೆ ಮತ್ತು ಗೋಮಾಂಸ ಮಾರಾಟ ಮಾಡುತ್ತಿರುವುದರ ಬಗ್ಗೆ ಮಾಹಿತಿ ನೀಡಬೇಕು ಎಂದು ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಸದಸ್ಯ ಶಿವೂ ಜಿಪ್ಪಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಗೋವುಗಳ ರಕ್ಷಣೆ ಮಾಡುವ ಸಂದರ್ಭದಲ್ಲಿ ರವಿ ಚಾರ್ಲಿ, ದೀಪು, ಮಹೇಶ, ಪ್ರದೀಪ್ ಮಾವಿನಹಳ್ಳಿ, ಯಶು, ಕಾರ್ತಿಕ್, ಇತರರು ತಡರಾತ್ರಿ ವರೆಗೂ ಇದ್ದು ಗೋವುಗಳ ರಕ್ಷಣೆ ಮಾಡಿದ್ದಾರೆ.