ಟಿಂಬರ್ ಕಾರ್ಮಿಕರ ಸಂಘದಿಂದ ಕಾರ್ಮಿಕರ ದಿನಾಚರಣೆ
ಸಕಲೇಶಪುರ : ನಗರದಲ್ಲಿ ಟಿಂಬರ್ ಕಾರ್ಮಿಕರ ಸಂಘದ ವತಿಯಿಂದ ಬಹಳ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಪಟ್ಟಣದ ತೇಜಸ್ವಿವೃತ್ತದಿಂದ ಮೆರವಣಿಗೆಯ ಮೂಲಕ ರಾಜ ಬೀದಿಯಲ್ಲಿ ಸಾಗಿ ಮಲ್ಲಮ್ಮನ ಬಿದಿಯ ಕಾರ್ಮಿಕರ ಕಚೇರಿಯಲ್ಲಿ ನೂರಾರು ಕಾರ್ಮಿಕರ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಮೆರಗೂ ನೀಡಲಾಯಿತು.
ಕಾರ್ಮಿಕ ಸಂಘದ ಅಧ್ಯಕ್ಷರಾದ ಇರ್ಫಾನ್ ಮಾತನಾಡಿ ಮೇ 1ನೇ ತಾರೀಕಿನಂದು ಜಗತ್ತಿನಾದ್ಯಂತ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ ಇದನ್ನು ಅರ್ಥ ಮಾಡಿಕೊಂಡು ಅದರ ಬೆಳಕಿನಲ್ಲಿ ಇಂದಿನ ಕಾರ್ಮಿಕರ ಪರಿಸ್ಥಿತಿಗಳನ್ನು ಗ್ರಹಿಸಿ ಮಾತನಾಡುವುದು ಬಹಳ ಮುಖ್ಯವಾಗಿರುತ್ತದೆ. ಕಾರ್ಮಿಕರು ಪ್ರತಿದಿನ ತಮ್ಮದೇ ಆದ ಜವಾಬ್ದಾರಿಗಳನ್ನು ನಂಬಿ ಕಾರ್ಯನಿರ್ವಹಿಸುತ್ತಾರೆ ಈ ಒಂದು ದಿನವಾದರೂ ಎಲ್ಲಾ ಕಷ್ಟ ನೋವುಗಳನ್ನು ಮರೆತು ಸಂತೋಷದಿಂದ ಇರಬೇಕು ಎಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಅತಿಥಿಗಳಾಗಿ ಕರವೇ ತಾ ” ಅಧ್ಯಕ್ಷ ರಮೇಶ್ ಪೂಜಾರಿ , ಅಂಬುಲೆನ್ಸ್ ಚಾಲಕ ಅಪ್ಪಯ್ಯ , ಸಾಮಾಜಿಕ ಹೋರಾಟಗಾರ ಇದ್ರಿಸ್ , ಪುರಸಭೆ ಮಾಜಿ ಸದಸ್ಯರಾದ ಸುಲೇಮಾನ್ , ಪುರಸಭೆ ನೌಕರರಾದ ಚಂದ್ರು , ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಘು , ಕಾರ್ಯದರ್ಶಿ ದೇವರಾಜ್ , ಉಪಾಧ್ಯಕ್ಷ ಸೋಮಶೇಖರ್ , ಗೌರವಾಧ್ಯಕ್ಷ ದೇವರಾಜ್ , ಸಹಾಯ ಕಾರ್ಯದರ್ಶಿ ಅಬ್ದುಲ್ ಅಜೀಜ್ , ಖಜಾಂಚಿ ಸತೀಶ್ , ಸಲಹೆಗಾರರು ಶಜಾನ್ ಪಾಪಣ್ಣ , ಇತರರು ಉಪಸ್ಥಿತರಿದ್ದರು.