ಕಪ್ಪಿನಕೊಡಿ ದೇವಸ್ಥಾನದಲ್ಲಿ ಶಸ್ತ್ರ ಪೂಜೆ ಮಾಡಿದ ಬಜರಂಗದಳ ಕಾರ್ಯಕರ್ತರು…
ಸಕಲೇಶಪುರ – ಹಿಂದೂ ಧರ್ಮ ಪ್ರತಿಷ್ಟಾಯೇ ಸಿದ್ದ ಖಡ್ಗ ಸದಾವಯಂ ಎಂಬ ಧ್ಯೇಯದೊಂದಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಶಸ್ತ್ರಾಸ್ತ್ರಗಳನ್ನಿಟ್ಟು ಪೂಜೆ ಮಾಡಿದರು. ನಿರಂತರವಾಗಿ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದಾಳಿಯನ್ನು ಹಿಂದೂ ಸಮಾಜ ಎದುರಿಸಲು ಶಾಸ್ತ್ರದ ಜೊತೆ ಶಸ್ತ್ರದ ಅವಶ್ಯಕತೆಯು ಇದೆ ಎಂದು ಈ ಸಂದರ್ಭದಲ್ಲಿ ನಾಡಿನ ಸಮಸ್ತ ಹಿಂದೂಗಳಿಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳನ್ನು ರಾಜ್ಯ ಹಿಂದೂ ಮುಖಂಡ ರಘು ಸಕಲೇಶಪುರ ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಂಜು ಕಬ್ಬಿನಗದ್ದೆ. ರವಿ ಹೆಬ್ಬಸಾಲೆ. ಜತೀನ್ ಕುಮಾರ್. ಸೇರಿದಂತೆ ಇತರರು ಇದ್ದರು.