ಬಜರಂಗದಳ ಕಾರ್ಯಕರ್ತರ ಮಾಹಿತಿ ಮೆರೆಗೆ ನಗರಠಾಣೆ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ದಾಳಿ. ಕಾರಿನಲ್ಲಿ ತುಂಬಿದ ಗೋವಿನ ರಕ್ಷಣೆ..
ಸಕಲೇಶಪುರ – KA02N2402 ಮಾರುತಿ ಸುಜುಕಿ 800 ಬಿಳಿ ಬಣ್ಣದ ಕಾರಿನಲ್ಲಿ ಹಿಂಸಾತ್ಮಕವಾಗಿ ಕೈ-ಕಾಲು ಕಟ್ಟಿ ಕಟಾವು ಮಾಡಲು ಗೋವನ್ನು ಸಾಗಿಸಲಾಗುತ್ತಿದೆ. ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರ ನಗರ ಠಾಣೆಯ ವೃತ್ತ ನಿರೀಕ್ಷಕರಿಗೆ ಕರೆ ಮುಖಾಂತರ ಮಾಹಿತಿ ನೀಡಿದ್ದಾರೆ ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಜಗದೀಶ್ ಅವರ ನೇತೃತ್ವದಲ್ಲಿ ಗಾಣದಹೊಳೆಯಿಂದ ಬರುತ್ತಿದ್ದ ಬಿಳಿ ಬಣ್ಣದ 800 ಕಾರನ್ನು ತಡೆದಿದ್ದಾರೆ.
ವಾಹನ ನಿಲ್ಲಿಸದೆ ವೇಗವಾಗಿ ಹೆನ್ನಲ್ಲಿ ಕಡೆ ಹೋದ ಕಾರನ್ನು ಹಿಂಬಾಲಿಸಿ ತಡೆಯುವಲ್ಲಿ ನಗರ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಅವರು ಯಶಸ್ವಿಯಾಗಿದ್ದಾರೆ.
ಕಾರಿನಲ್ಲಿ ಇದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಕಾರಿನಲ್ಲಿ ತುಂಬಿದ ಹೋರಿಯನ್ನು ರಕ್ಷಣೆ ಮಾಡಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗೋವನ್ನು ಗೋಶಾಲೆಗೆ ಬಿಡಲಾಗುವುದು ಎಂದು ಪೋಲಿಸ್ ಮೂಲಗಳು ಮಾಹಿತಿ ನೀಡಿವೆ.