ಅಡ್ವೋಕೇಟ್ ಸ್ಟಿಕ್ಕರ್ ಇರುವ ಕಾರು ಬಳಸಿ ಗೋಮಾಂಸ ಸಾಗಾಟ – ದತ್ತಪೀಠ ಮುಕ್ತಿ ಹೋರಾಟ ಸಮಿತಿಯ ಮಾಹಿತಿ ಆಧರಿಸಿ ಪೋಲಿಸರ ದಾಳಿ.
ಸಕಲೇಶಪುರ – ಕರ್ನಾಟಕದಲ್ಲಿ ಗೋ ರಕ್ಷಣೆಗಾಗಿ ಪ್ರಬಲವಾದ ಕಾನೂನು ಇದ್ದರೂ ಕೂಡ ಗೋವಿನ ಹತ್ಯೆ. ಅಕ್ರಮ ಗೋ ಸಾಗಾಟ, ಗೋ ಕಳ್ಳತನ ನಿಂತಿಲ್ಲ. ಇವತ್ತು ಬೆಳಗ್ಗೆ ಹಾಸನ ಭಾಗದಿಂದ ಬೈಪಾಸ್ ರಸ್ತೆಯಲ್ಲಿ KA04MA1482 ಸ್ಯಾಂಟ್ರೋ ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿರುವ ಖಚಿತವಾದ ಮಾಹಿತಿ ದತ್ತಪೀಠ ಮುಕ್ತಿ ಹೋರಾಟ ಸಮಿತಿಯ ಕಾರ್ಯಕರ್ತರು ಪಡೆದುಕೊಂಡಿದ್ದಾರೆ.
ದೂರದಿಂದ ಕಾರನ್ನು ಹಿಂಬಾಲಿಸಿದಾಗ ಕಾರಿನ ಹಿಂಭಾಗದ ವಿನ್ ಸಿಲ್ಡ್ ಗ್ಲಾಸ್ ಮೇಲೆ ವಕೀಲರು ಎಂಬ ಸ್ಟಿಕ್ಕರ್ ಅಂಟಿಸಲಾಗಿತ್ತು.
ಕಾರಿನ ಒಳಗಡೆ ಟಾರ್ಪಲ್ ಹಾಕಿ ಮುಚ್ಚಲಾಗಿತ್ತು. ಕಾರಿನ ಒಳಗಡೆ ಗೋಮಾಂಸ ಇರುವುದನ್ನು ಖಚಿತ ಪಡಿಸಿಕೊಂಡ ಕಾರ್ಯಕರ್ತರು ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು ನಗರ ಠಾಣೆಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕಾರು ಸಕಲೇಶಪುರ ನಗರ ಬೈಪಾಸ್ ರಸ್ತೆಯಿಂದ ಕಪ್ಪಿನಕೂಡಿ ಸಮೀಪ ಕುಶಾಲನಗರ ಬಡವಾಣೆ ಒಳಗೆ ತಿರುಗುತ್ತಿದ್ದಂತೆ ತಡೆದು ಪರಿಶೀಲನೆ ನಡೆಸಿದ್ದಾರೆ.
ಕಾರಿನ ಹಿಂಭಾಗದಲ್ಲಿ ಮಾಂಸ ಇರುವುದನ್ನು ಪೋಲಿಸರು ಖಚಿತ ಪಡಿಸಿಕೊಂಡ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಯಾಂಟ್ರೋ ಕಾರ್ ಹಾಗೂ ಚಾಲಕನ್ನು ವಶಕ್ಕೆ ತೆಗೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.