ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆ
ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಇಂದು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಒಟ್ಟು 12 ಜನ ಸದಸ್ಯರ ಒಮ್ಮತದಿಂದ ಗುಲಗಳಲೆ ಕ್ಷೇತ್ರದ ಅಭ್ಯರ್ಥಿಯಾದ ಸತೀಶ್ ಅವರನ್ನು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಚುನಾವಣಾ ಅಧಿಕಾರಿಯಾಗಿ ತಾಲೂಕು ದಂಡಾಧಿಕಾರಿಗಳಾದಂತ ಅರವಿಂದ್ ರವರ ಸಮ್ಮುಖದಲ್ಲಿ ಉಪಾಧ್ಯಕ್ಷರಾಗಿ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ , ಕಾರ್ಯದರ್ಶಿ ಜಯಪ್ರಕಾಶ್ , ಪಂಚಾಯಿತಿ ಅಧ್ಯಕ್ಷರು ರೇಖ ಗೋಪಿನಾಥ್, ಮಾಜಿ ಅಧ್ಯಕ್ಷರು ರಾಮಕೃಷ್ಣ ಬಿ ಎಸ್ , ಸದಸ್ಯರುಗಳಾದಂತ ಜೈ ಶಂಕರ್ , ರಾಕೇಶ್ , ಶ್ರೀನಿವಾಸ್, ರಮೇಶ್, ಚಾಲ್ಸ್ , ಗಿರಿಜ, ಪುಷ್ಪ, ವನಜಾಕ್ಷಿ, ಸವಿತಾ , ಮೋಹಿನಿ, ಹಾಗೂ ಪಂಚಾಯತಿ ಸಿಬ್ಬಂದಿ ವರ್ಗ ಇತರರು ಉಪಸ್ಥಿತರಿದ್ದರು.