ಎರಡು ವರ್ಷ ಕಸಬಾ ಬೆಳಗಾರರ ಸಂಘದ ರಥವನ್ನ ಯಶಸ್ವಿಯಾಗಿ ಮುಂದಕ್ಕೆ ಎಳೆದಿದ್ದಾರೆ.
ಲೋಹಿತ್ ಕೌಡಳ್ಳಿ ಅವರು ಒಳ್ಳೆಯ ಸಂಘಟನೆಗಾರ ಎಂಬುದನ್ನು ನಾನು ಬಲವಾಗಿ ಸಮರ್ಥಿಸಿಕೊಂಡು ಹೇಳುವೆ. ರಾಜಕಾರಣದಲ್ಲಿ ಯುವ ಮುಖಂಡನಾಗಿ ಗುರುತಿಸಿಕೊಂಡು ಹಲವಾರು ಹುದ್ದೆಗಳನ್ನು ಸಂಘಟನೆಯ ಪಕ್ವವನ್ನ ತೋರಿಸಿದ್ದಾರೆ.
ಸಕಲೇಶಪುರ ಕೌಡಹಳ್ಳಿ ಗ್ರಾಮದ ನಿವೃತ್ತ ರೈಲ್ವೆ ಇಲಾಖೆ ನೌಕರ ಬಸವರಾಜು ರುಕ್ಮಿಣಿ ದಂಪತಿಗಳ ಪುತ್ರರಾಗಿ 19-04-1977 ರಲ್ಲಿ ಲೋಹಿತ್ ಜನಿಸಿದರು. ಬಿ ಎ ಪದವಿ ಪಡೆದಿದ್ದಾರೆ.
ಸಕಲೇಶಪುರ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯದಿಂದ ದೆಹಲಿಯವರೆಗೂ ಸಂಘಟನಾ ಸಭೆಗಳಲ್ಲಿ ಭಾಗವಹಿಸಿ ಆಡಳಿತದಲ್ಲಿರುವ ಸರ್ಕಾರಗಳ ವೈಫಲ್ಯಗಳನ್ನು ಎತ್ತಿ ತೋರಿಸಿ ಪ್ರತಿಭಟಿಸಿ ಯುವಕರಿಗೆ ಸ್ಪೂರ್ತಿಯಾಗಿದ್ದರು,
ಬಗರ್ ಹುಕುಂ ಕಮಿಟಿ ಸದಸ್ಯರಾಗಿ ಸಾವಿರಾರು ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಭೂಮಿ ಒದಗಿಸಿ ಕೊಟ್ಟಿದ್ದಾರೆ, ಕೆಲವು ಅರ್ಜಿಗಳ ವಿಚಾರದಲ್ಲಿ ತಂಟೆ ತಕರಾರು ಮಾಡಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ತಾಹಸಿಲ್ದಾರ್ ಕಚೇರಿಯಲ್ಲಿ ಧರಣಿ ನಡೆಸಿದ್ದು ಇವರ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿಯಾಗಿದೆ,
ಟಿಎಪಿಎಂಎಸ್ ಅಧ್ಯಕ್ಷರಾಗಿ ರೈತರಿಗೆ ಅನುಕೂಲಕ್ಕಾಗಿ ತನ್ನ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ ಕೀರ್ತಿ ಲೋಹಿತ್ ರವವರಿಗೆ ಸಲ್ಲಬೇಕು, ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕರೋನ ಮಹಾಮಾರಿ ವ್ಯಾಪಕವಾಗಿತ್ತು ಆ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿಗಳನ್ನು ಉತ್ತಮ ಬೆಲೆಗೆ ಖರೀದಿಸಿ ಟಿಪಿಎಂಎಸ್ ಸಭಾಂಗಣದಲ್ಲಿ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಿ ಎಲ್ಲರ ಗಮನ ಸೆಳೆದಿದ್ದರು. ಕೃಷಿಗೆ ಬಳಸುವ ರಾಸಾಯನಿಕ ರಸಗೊಬ್ಬರಗಳು ಎಂದು ಕೊರತೆಯಾಗದಂತೆ ನೋಡಿಕೊಂಡಿದ್ದಾರೆ, ನಡೆಸಿದ ಕೀರ್ತಿ ಇವರಿಗೆ ಸಲ್ಲಬೇಕು.
ಒಬ್ಬ ಕೃಷಿಕನಾಗಿ ಬೆಳಗಾರ ಸಮುದಾಯಕ್ಕೆ ಸಂಘಟನೆಯ ಮೂಲಕ ಸೇವೆ ಸಲ್ಲಿಸಿದ್ದನ್ನು ನಾವು ಮರೆಯುವಂತಿಲ್ಲ. ಕಸಬಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸಂಘವು ಬಲಿಷ್ಠವಾಗಿ ಬೆಳೆಯಲು ಇವರು ಮಾಡಿರುವ ಕಾಯಕವೇ ಅಮೂಲ್ಯವಾದದು. ಶಿಸ್ತು ಬದ್ಧ ಸಭೆಗಳು ಕಾಲ ಕಾಲ ತಕ್ಕಂತೆ ನಡೆಸಿ ಪ್ರತಿ ಸಭೆಗಳನ್ನು ಬೆಳಗಾರಿಗೆ ಉಪಯುಕ್ತ ಮಾಹಿತಿಗಳನ್ನು ಮತ್ತೆ ಸರ್ಕಾರದಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ವಿಚಾರಗಳನ್ನ ತಜ್ಞರಿಂದ ಮಂಡಿಸುತ್ತಾ,
ಸಕಲೇಶಪುರ ಆಡಳಿತ ಮಂಡಳಿಯ ಅಧಿಕಾರಿಗಳನ್ನು ಪ್ರತಿ ತಿಂಗಳ ಸಭೆಗೆ ಕರೆದು ಮಾಹಿತಿ ಒದಗಿಸುತ್ತಿದ್ದರು. ಬೆಳಗಾರ ಸಮುದಾಯವನ್ನು ಕೃಷಿ ಅಧ್ಯಯನಕ್ಕೆ ವಿದೇಶ ಪ್ರವಾಸ ಕೈಗೊಂಡರು, ಹಲವಾರು ರಾಜ್ಯಮಟ್ಟದ ಕೃಷಿ ಅಧ್ಯಯನ ಪ್ರವಾಸ ಕೈಗೊಂಡದ್ದು ವಿಶೇಷ ಅನುಭವದ ಸಾದನೆ, ಒತ್ತುವರಿ ಸಮಸ್ಯೆ, ಕಾಡಾನೆ ಸಮಸ್ಯೆ, ವಿದ್ಯುತ್ ಸಮಸ್ಯೆ ಇನ್ನಿತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಹೋರಾಟ ನಡೆಸಿ ತಮ್ಮ ವೈಯಕ್ತಿಕ ಕೌಟುಂಬಿಕ ತೋಟದ ಕೆಲಸಗಳನ್ನು ಬದಿಗಿಟ್ಟು ಸಮಯ ಹಣವನ್ನು ವ್ಯಯಮಾಡಿ ಬೆಳಗಾರ ಸಂಘಟನೆಗೆ ದುಡಿದಿದ್ದಾರೆ.
ಕಸಬಾ ಕಾಫಿ ಬೆಳಗಾರ ಸಂಘಟನೆಯ ಕಾರ್ಯಕಾರಿ ಮಂಡಳಿ ಸದಸ್ಯರೊಂದಿಗೆ ಗೆಳೆಯರ ಸಹಕಾರದೊಂದಿಗೆ ಹೋಬಳಿ ಹಾಗೂ ಪಂಚಾಯತಿ ಮಟ್ಟದಲ್ಲಿ ಸಂಘಟನೆಯನ್ನು ಬೆಳೆಸಿದ್ದಾರೆ. ಯುವ ಕಾಫಿ ಬೆಳಗಾರರು ಹೆಚ್ಚು ಬೆಳೆಗಾರ ಸಂಘದತ್ತ ಮುಖ ಮಾಡಲು ಅವಿರತ ಶ್ರಮಿಸಿದ್ದಾರೆ, ಸಂಘದ ಬೆಳವಣಿಗೆಗೆ ಪೂರಕವಾಗಿ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಮುನ್ನಡೆಸಿದ್ದಾರೆ ತನ್ನಂತೆ ಇತರರೂ ನಾಯಕತ್ವವನ್ನು ರೂಪಿಸಿಕೊಳ್ಳಲು ನೆರವಾದ ಇವರ ವ್ಯಕ್ತಿತ್ವವು ಮತ್ತಷ್ಟು ವಿಕಸನವಾಗಲಿ.
ಇವರ ಅವಧಿಯಲ್ಲಿ ನನ್ನಂಥವರನ್ನು ಕರೆದು ಗೌರವ ನೀಡಿದ್ದಾರೆ. ಮಧುರ ರವರೊಂದಿಗೆ ವಿವಾಹವಾಗಿ
ಮಗಳು ಸಿಂಚನ ಮಗ ಕಾರ್ತಿಕ್ ಪಟೇಲ್ ರೊಂದಿಗೆ ಸುಖಿ ಕೌಟುಂಬಿಕ ಜೀವನ ನಡೆಸುತ್ತಿದ್ದಾರೆ. ಈ ನಾಡಿಗೆ ಇವರಿಂದ ಪುಣ್ಯದ ಕೆಲಸಗಳು ಆಗುತ್ತಿರಲಿ ಎಂದು ನಾನು ಆಶಿಸುವೆ. ಬೆಳಗಾರ ಸಂಘಟನೆಗಳಲ್ಲಿರುವ ಇತರರು ಲೋಹಿತ್ ಅವರ ದಾರಿಯಲ್ಲಿ ಸಾಗಬೇಕಾಗಿದೆ ಎಂದು ಬಯಸುತ್ತೇನೆ.
*ಲೋಹಿತ್ ಕೌಡಹಳ್ಳಿ ಬದುಕಿನ ಹಾದಿ ಹೆಜ್ಜೆ ಗುರುತುಗಳು.*
• 1995 ರಲ್ಲಿ ಕಾಲೇಜ್ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲುವು ಪಿ.ಯು.ಸಿ ಯಲ್ಲೇ ವಿದ್ಯಾರ್ಥಿ
ಸಂಘದ ಕಾರ್ಯದರ್ಶಿಯಾಗಿ ಸೇವೆ.
• 2008 ರಲ್ಲಿ ಆಕ್ಟಿವ್ ಇನ್ ಕಾಂಗ್ರೆಸ್,
• 2010 ರಲ್ಲಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ
• 2010 ರಲ್ಲಿ ಬಳ್ಳಾರಿ ಚಲೋ ಪಾದಯಾತ್ರೆಗೆ ಪಾಲ್ಗೊಂಡಿದರು.
• 2010 ರಲ್ಲಿ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯತ್ ಚುನಾವಣಿ ಕೆಲಸ
• 2011 ರಲ್ಲಿ ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ
ಆಯ್ಕೆ
ಯಡಿಯೂರಪ್ಪ ಸರ್ಕಾರದ ವಿರುದ್ಧ ಹಲವಾರು ಮುಷ್ಕರ
• 2015 ರಲ್ಲಿ ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ (ಅಕ್ರಮ ಸಕ್ರಮ)
ಸದಸ್ಯನಾಗಿ ನಾಮ ನಿರ್ದೇಶನ, ಸಕಲೇಶಪುರ, ಆಲೂರು ಕಟ್ಟಾಯದಲ್ಲಿ ಅತೀ ಹೆಚ್ಚು ಸುಮಾರು
3500 ಕ್ಕೂ ಹೆಚ್ಚು ಭೂ ಮಂಜೂರಾತಿ
• 2019 ರಲ್ಲಿ 7 ಜನ ಕಾಂಗ್ರೆಸ್ ಸದಸ್ಯರನ್ನ ಗೆಲ್ಲಿಸುವುದರೊಂದಿಗೆ ಐ.ಎ.ಪಿ.ಸಿ ಎಮ್ .ಎಸ್ ಗೆ
ನಿರ್ದೇಶಕನಾಗಿ ಆಯ್ಕೆ
• 2019 ಏಪ್ರಿಲ್ 19 ರಿಂದ 2021 ನವೆಂಬರ್ ವರೆಗೆ ಐ.ಎ.ಪಿ.ಸಿ ಎಮ್,ಎನ್ ಅಧ್ಯಕ್ಷನಾಗಿ
ಯಶಸ್ವಿ ಕೆಲಸ ನಿರ್ವಹಣೆ ಅತೀ ಹೆಚ್ಚು ಲಾಭದಾಯಕದಂತ ಐ.ಎ.ಪಿ.ಸಿ ಎಮ್,ಎಸ್
2-1
• ಕೋವಿಡ್-19 ಸಂದರ್ಭದಲ್ಲಿ ಕೋವಿಡ್ ಫ್ರೆಂಟ್ ಲೈನ್ ವಾಲಿಯರ್ ಅಲಿ ಅತೀ ಹೆಚ್ಚು ಕೆಲಸ
ನಿರ್ವಹಣೆ
• 2014-2016 ಆನೆಮಹಲ್ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸೇವೆ
• 2018-2018 ಕಸಬಾ ಹೋಬಳಿ ಬೆಳೆಗಾರರ ಸಂಘದ ನಿರ್ದೇಶಕರಾಗಿ ಸೇವೆ
• 2018-2021 ಕಸಬಾ ಹೋಬಆ ಬೆಳೆಗಾರರ ಸಂಘದ ಗೌ|| ಕಾರ್ಯದರ್ಶಿಯಾಣ ಸೇವೆ
• 2018-2022 ಮಲೆನಾಡು ವೀರಶೈವ ಸಮಾಜದ ನಿರ್ದೇಶಕನಾಗಿ ಸೇವೆ.
• 2021-2023 ಕಸಬಾ ಹೋಬಆ ಬೆಳೆಗಾರ ಸಂಘಟದ ಅಧ್ಯಕ್ಷರಾಗಿ ಸೇವೆ.
• 2021-2022 ನೇ ಸಾಲಿನ ಬಿ.ಎಡ್ ಕಾಲೇಜಿನಲ್ಲಿ IQAL ನಲ್ಲಿ ಸದಸ್ಯರಾಗಿ ಸೇವೆ.