ಮನೆಯೊಳಗಿನ ನೆಲಮಾಳಿಗೆಯಲ್ಲಿ ನಡೆಸುತ್ತಿದ್ದ ಕಸಾಯಿಖಾನೆ ಮೇಲೆ ಬಜರಂಗದಳ ಕಾರ್ಯಕರ್ತರ ಮಾಹಿತಿ ನೀಡಿದ ಪೋಲಿಸರ ದಾಳಿ…
ಸಕಲೇಶಪುರ – ನಗರದಲ್ಲಿ ದಿನೇದಿನೇ ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಸಾಗಾಟ. ನಡೆಯುತ್ತಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಜರಂಗದಳ ಕಾರ್ಯಕರ್ತರ ಮಾಹಿತಿ ಆಧರಿಸಿ ಪೋಲಿಸರು ಕುಶಾಲನಗರ ಬಡಾವಣೆಯ ಫರೀದ್ ಮನೆ ಮೇಲೆ ಧಾಳಿ ನಡೆಸಿದ್ದು ಮನೆಯೊಳಗಿನ ನೆಲಮಾಳಿಗೆಯಲ್ಲಿ ರಹಸ್ಯವಾಗಿ ಕಸಾಯಿಖಾನೆ ಮಾದರಿಯಲ್ಲಿ ಕೊಠಡಿಯನ್ನು ಮಾರ್ಪಾಡು ಮಾಡಲಾಗಿತ್ತು.
ರಹಸ್ಯ ಕೊಠಡಿ ಒಳಗೆ ಎರಡು ಗೋವುಗಳನ್ನು ವಧೆ ಮಾಡಲಾಗಿದ್ದು ಸಂಪೂರ್ಣ ಮಾಂಸವನ್ನು ನೇತು ಹಾಕಲಾಗಿತ್ತು. 40 ಕೆ.ಜಿ ಅಷ್ಟು ಗೋವಿನ ಕರುಳು ತ್ಯಾಜ್ಯ ಹಾಗೂ ಬರೊಬ್ಬರಿ 300 ಕೆ.ಜಿ ಅಷ್ಟು ಗೋಮಾಂಸವನ್ನು ಸಂಗ್ರಹಿಸಿಡಲಾಗಿತ್ತು. ವಾಸದ ಮನೆಯ ಒಳಗೆ ಕಟಾವು ಮಾಡಿದ್ದು ಅಕ್ಕಪಕ್ಕದ ಗ್ರಾಮಸ್ಥರು ರಕ್ತವನ್ನು ನೀರಿನ ಚರಂಡಿಗೆ ಬಿಡಲಾಗುತ್ತಿದ್ದು ಕಾಯಿಲೆಗಳು ಹರಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಂ ಬಹುಸಂಖ್ಯಾತ ಕುಶಾಲನಗರ ನಗರ ಬಡಾವಣೆಯಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಸೇರುತ್ತಿದ್ದಂತೆ ಪೋಲಿಸರು ಒಂದು ರಿಸರ್ವ್ ವಾಹನವನ್ನು ಸ್ಥಳದಲ್ಲಿ ಹಾಕಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು.
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಫರೀದ್ @ ಪಾರ್ರೂ ಮೇಲೆ ನಗರ ಠಾಣೆಯಲ್ಲಿ ಅನೇಕ ಪ್ರಕರಣಗಳಿದ್ದು ಆತನ ಮೇಲೆ ನಗರ ಠಾಣೆಯಲ್ಲಿ ರೌಡಿ ಶೀಟ್ ಕೂಡ ತೆರೆದು ಬುದ್ಧಿವಾದ ಹೇಳಲಾಗಿತ್ತು. ಮತ್ತೊಬ್ಬ ಆರೋಪಿ ನಜೀರ್ ತಲೆ ಮರೆಸಿಕೊಂಡಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಕಲೇಶಪುರ ಉಪವಿಭಾಗದ ಅಧೀಕ್ಷಕರಾದ ಪ್ರಮೋದ್ ಅವರು ಸೇರಿದಂತೆ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕರು ಹಾಗೂ ನಗರ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು..