ಜೈಕಿಸಾನ್ ಎಂಬ ಘೋಷ, ಜೈಜವಾನ್ ನಷ್ಟೇ ಸತ್ವಯುತ…. -ನಿವೃತ್ತ ಯೋಧ ಉದಯ್
ಆಲೂರು ತಾ. ಕೆ ಹೊಸಕೋಟೆ ಹೋ. ಹರಿಹಳ್ಳಿ ಮಂಗಳ ಕಲಾ ಸಾಹಿತ್ಯ ವೇದಿಕೆಯು ಆಯೋಜಿಸಿದ್ದ 78ನೇ ಭಾರತದ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ *ನಿ. ಯೋಧ ಉದಯ್ ಕುಮಾರ್* ನಮ್ಮ ಶಾಲಾದಿನಗಳಲ್ಲಿ ಶಾಲೆಗಳಲ್ಲಿ ಮಾತ್ರಾ ದಿನಾಚರಣೆಯೆಂದು ಆಚರಿಸಿ ಮಕ್ಕಳಿಗೆ ಸಿಹಿ ನೀಡಿ ಕಳಿಸುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಸಂಘ- ಸಂಸ್ಥೆಗಳೂ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸುವ ಪರಿಪಾಠ ಬೆಳೆಸಿಕೊಂಡಿವೆ, ಜೈಜವಾನ್ ಎಂಬಷ್ಟೇ ಪ್ರಸ್ತುತವಾದ ಘೋಷಣೆ ಜೈಕಿಸಾನ್ ಎನ್ನುವಂತಹುದು. ನಾವು ಏನು ಸಂಪಾದಿಸಿದರೂ ಅನ್ನವನ್ನಲ್ಲದೇ ಹಣವನ್ನೋ, ಚಿನ್ನವನ್ನೋ ತಿನ್ನಲಾಗದು, ರೈತ ಬೆಳೆದರಷ್ಟೇ ಉಳಿದದ್ದೆಲ್ಲಾ, ರೈತನಿಲ್ಲದೇ ಬೇರೇನೂ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಸೋಮೇಶ್ ಸರ್ವರನ್ನೂ ಸ್ವಾಗತಿಸಿದರು, ವೇದಿಕೆಯ ಕಾರ್ಯದರ್ಶಿ ಸತ್ಯನಾರಾಯಣ ವಂದಿಸಿದರು. ವೇದಿಕೆಯ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರುಗಳು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕವೃಂದ, ಸಾರ್ವಜನಿಕರು ಉಪಸ್ಥಿತರಿದ್ದರು.