ರಾಷ್ಟ್ರಿಯ ಹೆದ್ದಾರಿ ಕಾಮಗಾರಿಯವರು ಸರ್ವಿಸ್ ರಸ್ತೆ ಮಾಡದೇ ಅವೈಜ್ಞಾನಿಕವಾಗಿ ರಸ್ತೆ ತಿರುವುಗಳನ್ನು ಮುಚ್ಚಿರುವ ಕುರಿತು
ರಾಜ್ ಕಮಲ್ ಕನ್ ಸ್ಟ್ರಕ್ಷನ್ ಕಂಪನಿಯಿಂದ ಈಗಾಗಲೆ ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿಯಿಂದ ಬೇಸತ್ತಿರುವ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಿಂದ ತೊಂದರೆ ಕೊಡುತ್ತಲೆ ಬಂದಿರುತ್ತಾರೆ
ಅದರಂತೆ ಮಳಲಿ ಬೈಪಾಸ್ ರಸ್ತೆಯಲ್ಲಿ ಮೇಲ್ಸೇತುವೆಯಾಗಲಿ ಅಥವಾ ಸರ್ವಿಸ್ ರಸ್ತೆಯಾಗಲಿ ಮಾಡದಿರುವುದು ಹಲವು ಅಪಘಾತಗಳು ಆಗಿವೆ ಮತ್ತು ಗುಲಗಳಲೆ ಮತ್ತು ಭಾಗೆ ವರೆಗೂ ಈಗಾಗಲೇ ಹಲವು ಸಾವುಗಳು ಸಂಭವಿಸಿವೆ ಸರ್ವಿಸ್ ರಸ್ತೆ ಮಾಡದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದು ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಣು ಮುಚ್ಚಾಲೆ ಆಡುತ್ತಿದ್ದಾರೆ
ಹಾಗೂ ಈಶ್ವರಹಳ್ಳಿ ಕೂಡಿಗೆಯಿಂದ ಬಾಳ್ಳುಪೇಟೆ ಊರಿನ ಒಳಗೆ ಹೋಗುವ ರಸ್ತೆ ವರೆವಿಗೂ ಯಾವುದೇ ತಿರುವು ರಸ್ತೆಗಳನ್ನು ಕೊಡದೆ ಮುಂದೆ ನೆಡೆಯಬಹುದಾದ ಮತ್ತು ಈಗಾಗಲೆ ನೆಡೆದಿರುವ ಅಪಘಾತಗಳಿಗೆ ರಾಜ್ ಕಮಲ್ ಕನ್ ಸ್ಟ್ರಕ್ಷನ್ ಕಂಪನಿಯವರೆ ನೇರ ಹೊಣೆಗಾರರಾಗಿದ್ದು ಅವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗಿದೆ
ಈ ಮೇಲಿನ ವಿಷಯಕ್ಕೆ ಸಂಬಂದಿಸಿದಂತೆ ಈಶ್ವರಹಳ್ಳಿ ಕೂಡಿಗೆಯಿಂದ ಬಾಳ್ಳುಪೇಟೆ ಊರಿನ ಒಳಗೆ ಹೋಗುವ ರಸ್ತೆ ವರೆವಿಗೂ ಯಾವುದೇ ತಿರುವು ಇಲ್ಲದ ಕಾರಣ ಈ ನಡುವೆ ನಿಡನೂರಿಗೆ ತೆರಳುವ ರಸ್ತೆ ಮತ್ತು ನಂತರ ಚಕ್ಕನಾಯಕನಹಳ್ಳಿ ಊರು ಮತ್ತು ಪ್ರಾಥಮಿಕ ಶಾಲೆ ನಂತರ ಓಂ ನಗರ, ಅರಸುನಗರ,
ಹಿಂದು ಸಮಾದಿಗೆ ಹೋಗುವ ದಾರಿ ,ಗಣಪತಿ ದೇವಸ್ಥಾನ, ಜೆ ಪಿ ನಗರ,ಇಂದಿರಾನಗರ,ಬಸವೇಶ್ವರನಗರ,ಹಸುಗವಳ್ಳಿ ರಸ್ತೆ ,ದಾರ್ಮಿಕ ಕೇಂದ್ರಗಳಾದ 2 ಮಸೀಧಿಗಳು,ರಂಗನಾಥ ಪ್ರೌಡಶಾಲೆ,ಬ್ಲಾಸಂ ಶಾಲೆ,ವಿವೇಕಾ ಶಾಲೆ,ಬಿ ಸಿದ್ದಣ್ಣಯ್ಯ ಪ್ರೌಡಶಾಲೆ ಮತ್ತು ಪ್ರತಿ ಗುರವಾರ ಸಂತೆ ನೆಡೆಯುವ ಜಾಗಗಳನ್ನು ಒಳಗೊಂಡಿದೆ ಈ ಮಧ್ಯೆ ಸಾರ್ವಜನಿಕರು ,ಶಾಲಾ ಮಕ್ಕಳಿಗೆ ಬಹಳ ತೊಂದರೆಯಾಗಿದೆ ವಾಹನದಲ್ಲಿ ಬಾಳ್ಳುಪೇಟೆಯಿಂದ ಹೊರಟರೆ ಈಶ್ವರಹಳ್ಳಿ ಕೂಡಿಗೆಯಿಂದ ತಿರುಗಿಸಿಕೊಂಡು ಬರಬೇಕಾಗುತ್ತದೆ
ಹಾಗಾಗಿ ಸಾರ್ವಜನಿಕರು,ಶಾಲಾವಾಹನಗಳು ಏಕಮಾರ್ಗದಲ್ಲಿ ಸಂಚರಿಸಬೇಕಾಗಿದ್ದು ಇದರಿಂದ ಅಪಘಾತವಾಗುವ ಸಾಧ್ಯತೆಗಳೆ ಹೆಚ್ಚಾಗಿದೆ,ಇವರು 2 ಕಡೆ ಸರ್ವಿಸ್ ರಸ್ತೆ ಮಾಡಿಕೊಟ್ಟು ಈ ತಿರುವು ರಸ್ತೆಗಳನ್ನು ಮುಚ್ಚಲಿ ಇದಕ್ಕೆ ನಮ್ಮ ಯಾವುದೆ ಅಭ್ಯಂತರವಿರುವುದಿಲ್ಲ . ಈ ಕುರಿತಂತೆ ಸಾರ್ವಜನಿಕವಾಗಿ ದಿನಾಂಕ 22.08.2024 ರಂದು ಪ್ರತಿಭಟನೆ ದಯಾಮಾಡಿ ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಬೇಕಾಗಿ ವಿನಂತಿಸುತ್ತೇವೆ
ಈ ಮಧ್ಯೆ ಬಾಳ್ಳುಪೇಟೆ ಊರಿನ ಒಳಗಡೆ ರಸ್ತೆ ಪೂರ್ಣ ಗುಂಡಿಬಿದ್ದು ವಾಹನಗಳು ಚಲಿಸಲು ಅರೆಸಹಾಸ ಪಡಬೇಕಾಗಿದೆ,ಈ ರಸ್ತೆಯು ಈ ರಾಷ್ಟ್ರಿಯ ಹೆದ್ದಾರಿ ವಾಹನಗಳು ಚಲಿಸಿ ಗುಂಡಿಬಿದ್ದಿದ್ದು ಈ ರಸ್ತೆಯನ್ನು ಡಾಂಬರಿಕರಣ ಮಾಡಿಸಿಕೊಡಬೇಕಾಗಿದೆ, ದಯಾಮಾಡಿ ತಾವುಗಳು ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ಈ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.