ಸಕಲೇಶಪುರ. ಗುಲಗಳಲೆ ಗ್ರಾಮದಲ್ಲಿ ಅಕ್ರಮವಾಗಿ ಕಟ್ಟಿರುವ ಮಸೀದಿ ತೆರವು ಗೊಳಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರಘು ಸಕಲೇಶಪುರ ವಿಶ್ವ ಹಿಂದೂ ಪರಿಷದ ರಾಜ್ಯ ಕಾರ್ಯಕಾರಿಣಿ ಸದಸ್ಯ.
ಅಕ್ರಮವಾಗಿ ಯಾವುದೇ ಅನುಮತಿ ಪರವಾನಿಗೆ ಇಲ್ಲದೆ ಕಟ್ಟಿರುವ ಕಟ್ಟಡವಾಗಿದ್ದು
ಬಾಗೆ ಪಂಚಾಯತಿ ಕಾರ್ಯಾಲಯದಿಂದ ಯಾವುದೇ ಕಟ್ಟಡ ಪರವಾನಿಗೆ ಮತ್ತು ಅನುಮತಿ ಪಡಿಯದೇ ಅಕ್ರಮವಾಗಿ ಕಟ್ಟಡ ಕಟ್ಟಿ ನಮಾಜ್ ಮಾಡುತ್ತಿರುವುದು ಖಂಡನೀಯ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ದಾಖಲೆ ಇಲ್ಲದೆ ರಸ್ತೆ ಅಗಲೀಕರಣ ಸಮಯದಲ್ಲಿ ಪರಿಹಾರ ಪಡೆದು ಮತ್ತೆ ಅದೇ ಜಾಗದಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರೋದು ನಿಯಮ ಬಾಹಿರವಾಗಿದೆ.
ರಾಷ್ಟ್ರೀಯ ಹೆದ್ದಾರಿ 75 ರಿಂದ 125 ಅಡಿ ಬಿಟ್ಟು ಕಾಮಗಾರಿ ಮಾಡಬೇಕೆಂಬ ನಿಯಮವಿದ್ದರೂ ಸಹ ಅದರ ಒಳಗೆ ಈ ಅಕ್ರಮ ಕಟ್ಟಡ ಕಟ್ಟಿದ್ದಾರೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಓಡಾಡುವ ಸಕಲೇಶಪುರ ಅಧಿಕಾರಿಗಳು ಉಪವಿಭಾಗಾಧಿಕಾರಿಗಳು, ತಹಶೀಲ್ಧಾರ್, EO ರವರು ನೋಡಿಯೂ ಸಹ ಕಣ್ಣುಮುಚ್ಚಿ ಕುಳಿತಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ
ವಿಪತ್ತು ನಿರ್ವ್ಹಾಣ ರಸ್ತೆ ಕಬಳಿಕೆ
ಗುಲಗಳಲೆ ಮಸೀದಿ
ಬಾಳ್ಳುಪೇಟೆ ಮಸೀದಿ
ಮೇಲ್ಕಂಡ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಮನವಿ ನೀಡಿದರು ಯಾವುದೇ ಕ್ರಮ ವಹಿಸದೆ ಅಕ್ರಮಗಳಿಗೆ ನೇರವಾಗಿ ಬೆಂಬಲ ನೀಡುತ್ತಿರೋದು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಕಲೇಶಪುರ ಬಂದ್ ಮಾಡಿ ವಿರೋದಿಸಲಾಗುವುದು. ಎಂದು ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ವಿಪತ್ತು ನಿರ್ವಹಣೆ ರಸ್ತೆಗೆ ಮಣ್ಣು ಮುಚ್ಚಿರುವ ಬಗ್ಗೆ 100 ಕ್ಕೂ ಅಧಿಕ ಮನವಿ ನೀಡಿದ್ದು ಗುಲಗಳಲೆ ಮಸೀದಿ ಬಗ್ಗೆ ಮತ್ತು ಬಾಳ್ಳುಪೇಟೆ ಮಸೀದಿ ಬಗ್ಗೆ ದೂರು ನೀಡಿ ಕ್ರಮ ವಹಿಸಲು ಆಗ್ರಹಿಸಿದ್ದರು ಯಾವದೇ ಕ್ರಮ ಆಗಿಲ್ಲ.
ಸಣ್ಣ ಪುಟ್ಟದಾಗಿ ಮನೆ ಶೌಚಾಲಯ ಕಟ್ಟಿದರೆ ಅದನ್ನು ತೆರುವುಗೊಳಿಸಲು ದರ್ಪ ತೋರುವ ಅಧಿಕಾರಿಗಳು ಕಣ್ಣ ಮುಂದೆ ಅಕ್ರಮವಾಗಿ ಕಟ್ಟುತ್ತಿರುವ ಕಟ್ಟಡ ಮಸೀದಿಗಳು ಇವರಿಗೆ ಕಾಣುವುದಿಲ್ಲ. ಯಾಕೆ ಕ್ರಮ ವಹಿಸುವುದಿಲ್ಲ ಎಂಬುದೇ ಯಕ್ಷಪ್ರಶ್ನೆ ಆಗಿದೆ
ಕಾನೂನು ಎಲ್ಲರಿಗೂ ಒಂದೇ ಅದನ್ನು ಪಾಲಿಸಲು ಎಲ್ಲರಿಗೂ ಸೂಚಿಸಿ ಅಕ್ರಮ ನಡೆದಿದ್ದಲ್ಲಿ ಕ್ರಮ ಜರುಗಿಸಬೇಕು ತಮಗೆ ಸಂಬಂಧವಿಲ್ಲ ಎಂದು ಕುರುವ ಅಧಿಕಾರಿಗಳ ವಿರುದ್ಧ ಹೋರಾಟ ಅನಿವಾರ್ಯ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಗುಲಗಳಲೆ ಮಸೀದಿ ತಕ್ಷಣ ತೆರವುಗೊಳಿಸದ್ದಿದ್ದರೆ ಅಕ್ರಮವಾಗಿ ಕಟ್ಟಿರುವ ಮಸೀದಿ ಎದುರಿನ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಗೆ ಗ್ರಾಮಪಂಚಾಯತಿ PDO ಚಿನ್ನಸ್ವಾಮಿ ಅವರಿಗೆ ಬಜರಂಗದಳ ಕಾರ್ಯಕರ್ತರು ಮನವಿ ನೀಡಿದ್ದು ತಕ್ಷಣ ಅಕ್ರಮ ಮಸೀದಿ ಕಟ್ಟಡ ತೆರವುಗೊಳಿಸಲು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಘು ಸಕಲೇಶಪುರ, ಪ್ರದೀಪ್ ಪೂಜಾರಿ, ಗುರು, ದುಷ್ಯಂತ್ ಗೌಡ ಉಪಸ್ಥಿತಿ ಇದ್ದರು